Notable Deaths in Sandalwood. Here is the list of Kannada Film Industry Celebrities who passed away in 2017.

ಕನ್ನಡ ಸಿನಿಮಾಗಳ ಯಶಸ್ಸಿನ ಪಯಣದ ನಡುವೆ ಚಿತ್ರರಂಗದ ಕೆಲವು ಸಾಧಕರನ್ನ
ಕಳೆದುಕೊಳ್ಳಬೇಕಾಯಿತು. ಕನ್ನಡ ಸಿನಿಲೋಕದ ಹಿರಿಯ ನಿರ್ಮಾಪಕರು, ಖ್ಯಾತ ಗಾಯಕರು,
ಪ್ರತಿಭಾನ್ವಿತ ಯುವ ನಟರು, ಯುವ ನಿರ್ದೇಶಕರು ವಿಧಿಯ ಆಟಕ್ಕೆ ಬಲಿಯಾದರು.
ಪಾರ್ವತಮ್ಮ ರಾಜ್ ಕುಮಾರ್, ಸುದರ್ಶನ್, ಎಲ್.ಎನ್ ಶಾಸ್ತ್ರಿ, ಬಿವಿ ರಾಧಾ, ಪದ್ಮಾ
ಕುಮುಟಾ ಸೇರಿದಂತೆ ಇನ್ನು ಹಲವು ಚಿತ್ರೋಧ್ಯಮಿಗಳು ಇಹಲೋಕ ತ್ಯಜಿಸಿದರು. ಕೇವಲ ಕನ್ನಡ
ಸಿನಿಮಾ ಇಂಡಸ್ಟ್ರಿಯಲ್ಲಿ ಮಾತ್ರವಲ್ಲ, ಪರಭಾಷೆಯಲ್ಲೂ ಕೆಲವು ಖ್ಯಾತನಾಮರು ಈ ವರ್ಷ
ಕಣ್ಮೆರೆಯಾದರು. ವರ್ಷಾಂತ್ಯದಲ್ಲಿ ನಿಂತು ಹಿಂತಿರುಗಿ ನೋಡಿದಾಗ ಈ ಕಲಾವಿದರ ನೆನಪು
ಕಾಡುತ್ತಿದೆ. ಈ ವರ್ಷದಲ್ಲಿ ಚಿತ್ರರಂಗ ಕಂಡ ಸಾವು ನೋವುಗಳ ಕಹಿ ನೆನಪು ನಿಮ್ಮ
ಮುಂದಿದೆ.ಡಾ ರಾಜ್ ಕುಮಾರ್ ಅವರ ಪತ್ನಿ, ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕಿ
ಪಾರ್ವತಮ್ಮ ರಾಜ್ ಕುಮಾರ್ ಅವರು ಮಾರ್ಚ್ 31 ರಂದು ಇಹಲೋಕ ತ್ಯಜಿಸಿದರು. ಸುಮಾರು
80ಕ್ಕೂ ಅಧಿಕ ಚಿತ್ರಗಳನ್ನ ನಿರ್ಮಾಣ ಮಾಡಿದ್ದಾರೆ. ಶಿವರಾಜ್ ಕುಮಾರ್, ಪುನೀತ್ ರಾಜ್
ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಅನೇಕ ಪ್ರತಿಭೆಗಳನ್ನ ಕನ್ನಡ
ಚಿತ್ರರಂಗಕ್ಕೆ ಪರಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.